ಅವಳ ಆ ಹಾಡು
February 21, 2007 at 7:22 pm | In Uncategorized | 4 Commentsನಾನೆದ್ದಿಹೆ ಈ ನಟ್ಟಿರುಳಿನಲ್ಲಿ
ಜೋಂಪೂ ಬಾರದು ಏಕೆ,
ಕಾಡುತಿಹುದು ಆ ಸವಿನೆನಪು,
ಒಲವ ಕಣ್ಣೋಟದ ಹೊಳಪು.
ಅವಳ ಆ ಕೆನ್ನೆಮುತ್ತು,
ಮುದ್ದು, ಆ ತೊಡೆದಿಂಬು,
ತಲೆಗೂದಲ ಸವರುವ,
ಆ ಕೈ, ಬಂಗಾರದ ಗೈ!
ಅವಳ ಮೊಗ ಎನಿತಂದ,
ಎನಿತು ಚೆಂದ ಅವಳ ನಗೆ
ಅವಳ ಆ ಕೊರಲಿಂಪು,
ಕಿವಿ-ಮನ ಎರಡಕ್ಕೂ ತಂಪು
ದಿನವೂ ಅವಳ ಆ ಹಾಡು,
ಒಂದೇ ರಾಗ ಒಂದೇ ತಾಳ
ಆದರೂ ದಿನವೂ ಹೊಸತು,
ಅರೆ! ಅದು ಹೇಗೆ? ತಿಳಿಯದು!
ಆ ಹಾಡು ಅದೇ ಹಾಡು,
ಎನಿತು ಸಲ ಮಲಗಿಸಿತ್ತು
ಚಂದಿರನ ಕನಸಿನರಮನೆಗೆ
ಮಲ್ಲಗೆ ಕಳುಹಿಸುತ್ತಿತು.
ಆದರೆ ಈ ನಡುರಾತ್ರಿಯೊಳು,
ಅದೇ ಸವಿನೆನೆಪು ಬಂದು,
ತನ್ನ ಹಳೆಯ ಬೆರಳುಗಳಿಂದ ಮುಟ್ಟಿ,
ಮೆಲ್ಲಗೆ ತಟ್ಟಿ ಎಬ್ಬಿಸುತ್ತಿದೆ
ಎಬ್ಬಿಸಿ, ಹಳೆಯ ಆದೇ, ಆ
ಮಲಗಿಸುವ ಹಾಡನ್ನೇ ಹಾಡಿ,
ತುಸು ಮಲಗಲು,
ಬಿಡದೇ ಕಾಡಿಸುತಿದೆ ಏಕೆ.
-ಮಹೇಶ
4 Comments »
RSS feed for comments on this post. TrackBack URI
Blog at WordPress.com. | Theme: Pool by Borja Fernandez.
Entries and comments feeds.
ಇದು ಮಲಗಿಸುವ ಹಾಡಲ್ಲ, ಮಲಗಿರುವವರನ್ನು ಕಾಡುವ ಹಾಡು
. ಅಂದ ಹಾಗೆ ಯಾವಾಗ ಬರೆದೆ ಇದನ್ನು ? ತುಂಬಾ ಚೆನ್ನಾಗಿದೆ.
Comment by ಓರ್ವಗೆಳೆಯ — February 22, 2007 #
ನೆನ್ನೆ ನಟ್ಟಿರುಳಲ್ಲಿ!!!
Comment by Mahesh — February 22, 2007 #
ಈ ಒಲವ ಕಣ್ಣೋಟ ಯಾರದು ?
Comment by ಓರ್ವಗೆಳೆಯ — February 22, 2007 #
ಪದ್ಯ ಚೆನ್ನಾಗಿದೆ.
ತುಂಬ ಕಷ್ಟ ಪಟ್ಟಿರಬೇಕು.
ಅವಳಿಲ್ಲದೆ!!!!
ಹೀಗೇ ಮುಂದುವರಿಸು.
Comment by saranga — February 22, 2007 #